Belagavi District Central Co-Operative Bank LTD.
Telephone : 0831-2466896 Fax : +918312425803
 

 

PRESIDENT'S MESSAGE


ಸನ್ಮಾನ್ಯ ಎಲ್ಲ ಸಹಕಾರಿ ಬಂಧುಗಳಿಗೆ ವಂದನೆಗಳು,

ಪೂರ್ವಜರ ಪರಿಶ್ರಮದಿಂದ ಸನ್ 1919ರಲ್ಲಿ ಜನ್ಮ ತಾಳಿದ ಬ್ಯಾಂಕು ಸತತ 100 ವರ್ಷಗಳ ಕಾಲ ಸಮಾಜದ ಎಲ್ಲ ವರ್ಗಗಳ ಜನರಿಗೆ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕವಾಗಿ ವಿಶೇಷವಾಗಿ ಜಿಲ್ಲೆಯ ರೈತಾಪಿ ಜನರಿಗೆ ಸೇವೆ ಸಲ್ಲಿಸುತ್ತಾ ಶರವೇಗದಲ್ಲಿ ಮುನ್ನಡೆದಿದೆ. ದೇಶದ ಪ್ರತಿಷ್ಠಿತ ಹಾಗೂ ಅತ್ಯುತ್ತಮ ಬ್ಯಾಂಕು ಎಂಬ ಹೆಗ್ಗಳಿಕೆಯೊಂದಿಗೆ ಗುರುತಿಸಿಕೊಂಡಿರುವ ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿಗೆ ನಿಸ್ವಾರ್ಥ, ಪ್ರಾಮಾಣಿಕ, ಅನುಭವಿ ಹಾಗೂ ದಕ್ಷ ಸಹಕಾರಿ ಧುರೀಣರ ಮಾರ್ಗದರ್ಶನ ಹಾಗೂ ಶ್ರೀರಕ್ಷೆಯಿದ್ದು, ಬ್ಯಾಂಕು ಶತಮಾನೋತ್ಸವದ ಶುಭಗಳಿಗೆಯನ್ನು ಕಾತುರದಿಂದ ಕಾಯುತ್ತ ಅಭಿವೃದ್ಧಿ ಪಥÀದಲ್ಲಿ ಮುನ್ನುಗ್ಗುತ್ತಿದೆ.

ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷನಾಗಿ 16 ವರ್ಷಗಳ ಕಾಲ ಸೇವೆ ಸಲ್ಲಿಸುತ್ತ ಬಂದಿದ್ದು, ತಮ್ಮೆಲ್ಲರ ಸಹಕಾರದಿಂದ ಸರ್ವಾಂಗೀಣ ಅಭಿವೃದ್ಧಿಗೆ ಪ್ರಯತ್ನಿಸಿ ಬ್ಯಾಂಕು ಪ್ರಗತಿ ಪಥದತ್ತ ಸಾಗುತ್ತಿರುವದು, ತಮ್ಮೆಲ್ಲರಿಗೂ ತಿಳಿದ ವಿಷಯವಾಗಿದೆ. ಬ್ಯಾಂಕಿನ ಯಾವತ್ತೂ ಆಡಳಿತ ಮಂಡಳಿ ಸದಸ್ಯರಿಗೂ, ಜಿಲ್ಲೆಯ ಹಿರಿಯ ಹಾಗೂ ಕಿರಿಯ ಸಹಕಾರಿ ಧುರೀಣರಿಗೂ, ಸಹಕಾರ ಇಲಾಖೆಯ ಎಲ್ಲ ಅಧಿಕಾರಿಗಳಿಗೂ, ಬ್ಯಾಂಕಿನ ಸಮಸ್ತ ಗ್ರಾಹಕರಿಗೂ ಹಾಗೂ ಬ್ಯಾಂಕಿನ ಪರಿಸ್ಥಿತಿಗನುಗುಣವಾಗಿ ಸ್ಪಂದಿಸಿದ ಸಿಬ್ಬಂದಿ ವರ್ಗದವರಿಗೂ ನನ್ನ ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

ಜಿಲ್ಲೆಯಲ್ಲಿ 90 ಶಾಖೆಗಳನ್ನು ಹೊಂದಿದ್ದು ಶತಮಾನೋತ್ಸವ ಆಚರಣೆಯ ಸಂದರ್ಭದಲ್ಲಿ 101 ಶಾಖೆಗಳನ್ನು ಹೊಂದುವ ಗುರಿ ಇಟ್ಟುಕೊಂಡು ಭೌಗೋಳಿಕವಾಗಿ, ವ್ಯಾಪಾರಿ ವರ್ಗಗಳಿಗೆ, ರೈತರಿಗೆ, ಠೇವುದಾರರಿಗೆ ಹೆಚ್ಚಿನ ಸೌಲಭ್ಯವನ್ನು ಕಲ್ಪಿಸುವ ದೃಷ್ಠಿಯಿಂದ ಹಂತ ಹಂತವಾಗಿ 32 ತನ್ನ ಹೊಸ ಶಾಖೆಗಳನ್ನು ಪ್ರಾರಂಭಿಸುವ ಸಲುವಾಗಿ ಅನುಮತಿ ಕೋರಿ ಸಹಕಾರ ಇಲಾಖೆಗೆ ಸಲ್ಲಿಸಿದ ಪ್ರಸ್ತಾವನೆಗೆ 15 ಶಾಖೆಗಳನ್ನು ಪ್ರಾರಂಭಿಸುವ ಸಲುವಾಗಿ ಅನುಮತಿ ನೀಡಿರುತ್ತಾರೆÉ. ಅವುಗಳಲ್ಲಿ 04 ಶಾಖೆಗಳನ್ನು ಈಗಾಗಲೇ ಪ್ರಾರಂಭಿಸಿದ್ದು, ಉಳಿದ 11 ಶಾಖೆಗಳನ್ನು ತ್ವರಿತವಾಗಿ ಪ್ರಾರಂಭಿಸುವ ಕ್ರಮ ಇಡಲಾಗಿದೆ.

ಬ್ಯಾಂಕು ವರದಿ ವರುಷದಲ್ಲಿ ಸರ್ವ ವಿಧದಲ್ಲೂ ಪ್ರಗತಿ ಸಾಧಿಸಿದ್ದು, ರೂ:2,841 ಕೋಟಿ 98 ಲಕ್ಷ ಠೇವು ಸಂಗ್ರಹಿಸಿ ರೂ:2,591 ಕೋಟಿ 14 ಲಕ್ಷ ಸಾಲ ಹಂಚಿಕೆ ಮಾಡಿ, ರೂ:4,078 ಕೋಟಿ 05 ಲಕ್ಷ ದುಡಿಯುವ ಬಂಡವಾಳ ಹೊಂದಿ, ಸಾಲ ವಸೂಲಾತಿಯಲ್ಲಿಯೂ ಕೂಡಾ 96.84% ಪ್ರಮಾಣದಲ್ಲಿ ಪ್ರಗತಿ ಸಾಧಿಸಿ ಕರ್ನಾಟಕದಲ್ಲಿಯೇ ಅತ್ಯುತ್ತಮ ಬ್ಯಾಂಕು ಎಂದು ಪ್ರಶಂಸೆಗೆ ಪಾತ್ರವಾಗಿದೆ.

ಬ್ಯಾಂಕು ಕೃಷಿ ಸಾಲಕ್ಕೆ ಆದ್ಯತೆ ನೀಡಿ ಜಿಲ್ಲೆಯ 344235 ಕೃಷಿ ರೈತ ಬಾಂಧವರಿಗೆ ರೂ:1,356 ಕೋಟಿ 10 ಲಕ್ಷ ಕಿಸಾನ ಕ್ರೆಡಿಟ್ ಕಾರ್ಡ ಮುಖಾಂತರ ಸಾಲ ನೀಡಿ, ಕೇಂದ್ರ ಹಾಗೂ ರಾಜ್ಯ ಸರಕಾರಗಳು ನೀಡಿರುವ ಎಲ್ಲ ಸೌಲಭ್ಯಗಳನ್ನು ಜಿಲ್ಲೆಯ ರೈತ ಬಾಂಧವರಿಗೆ ಒದಗಿಸಿದೆ. ಜಿಲ್ಲೆಯಲ್ಲಿಯ 08 ಸಹಕಾರಿ ಸಕ್ಕರೆ ಕಾರಖಾನೆಗಳಿಗೆ ಬ್ಯಾಂಕಿನಿಂದ ರೂ:621 ಕೋಟಿ 58 ಲಕ್ಷ ಸಾಲ ಮಿತಿ ನೀಡಲಾಗಿದೆ. ಇನ್ನಿತರ 11 ಖಾಸಗಿ ಸಕ್ಕರೆ ಕಾರಖಾನೆಗಳಿಗೆ ರೂ:644 ಕೋಟಿ 58 ಲಕ್ಷ ಸಾಲ ಮಿತಿ ನೀಡಿದ್ದು ಜಿಲ್ಲೆಯನ್ನು ಸಕ್ಕರೆಯ ಜಿಲ್ಲೆಯನ್ನಾಗಿ ಮಾಡಲು ಬ್ಯಾಂಕಿನ ಪಾತ್ರ ಪ್ರಾಮುಖ್ಯವಾಗಿದೆಯೆಂದು ಹೆಮ್ಮೆಯಿಂದ ಹೇಳಬಯಸುತ್ತೇನೆ.

ಪ್ರಸ್ತುತ ವರ್ಷದಲ್ಲಿ ನಮ್ಮ ಬ್ಯಾಂಕು ಈ ಕೆಳ ಕಾಣಿಸಿದ ಯೋಜನೆಗಳನ್ನು ಹಾಕಿಕೊಂಡಿದೆ. 1) ಬ್ಯಾಂಕಿನ ವತಿಯಿಂದ ಎಲ್ಲ ಗಣಕೀಕೃತ ಪ್ರಾ.ಕೃ.ಪ.ಸ.ಸಂಘಗಳಿಗೆ PಔS ಂಖಿಒ ಗಳನ್ನು ಕೊಡುವ ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ. 2) ಬ್ಯಾಂಕಿನ ಪ್ರಧಾನ ಕಚೇರಿಯಲ್ಲಿ ಗಣಕೀಕೃತ ಪ್ರಾ.ಕೃ.ಪ.ಸ.ಸಂಘಗಳಿಗೆ ಪ್ರತ್ಯೇಕ ಡಾಟಾ ಸೆಂಟರ ಪ್ರಾರಂಭಿಸಿ ಎಲ್ಲ ಗಣಕೀಕೃತ ಸಂಘಗಳನ್ನು ಸದರಿ ಡಾಟಾ ಸೆಂಟರಕ್ಕೆ ಸಂಪರ್ಕಿಸುವ ಯೋಜನೆ ಹಮ್ಮಿಕೊಳ್ಳಲಾಗಿದೆ.

ವರ್ಷದಲ್ಲಿ ನಮ್ಮ ಬ್ಯಾಂಕು ಈ ಕೆಳ ಕಾಣಿಸಿದ ಯೋಜನೆಗಳನ್ನು ಜಾರಿಗೊಳಿಸಿರುತ್ತದೆ

  1. ಬ್ಯಾಂಕಿನಲ್ಲಿ ಉಳಿತಾಯ ಖಾತೆ ಹೊಂದಿದ ಗ್ರಾಹಕರಿಗೆ ಕೇಂದ್ರ ಸರಕಾರವು ಅನುಷ್ಠಾನಗೊಳಿಸಿದ ಪ್ರಧಾನ ಮಂತ್ರಿ ಜೀವನ ಜ್ಯೋತಿ ವಿಮಾ ಹಾಗೂ ಜೀವನ ಸುರಕ್ಷಾ ವಿಮಾ ಯೋಜನೆಗಳನ್ನು ಅಳವಡಿಸಿಕೊಳ್ಳಲಾಗಿದೆ.
  2. ಹೈನುಗಾರಿಕೆ ಉತ್ತೇಜನ ನೀಡುವ ಕುರಿತು ಆಯ್ದ ಪ್ರಾ.ಕೃ.ಪ.ಸ.ಸಂಘಗಳ ಮೂಲಕ ರೈತ ಸದಸ್ಯರುಗಳಿಗೆ ಹೈನುಗಾರಿಕೆಗಾಗಿ ಹಸು ಹಾಗೂ ಎಮ್ಮೆಗಳನ್ನು ಖರೀದಿಸಲು ಮಾಧ್ಯಮಾವಧಿ ಸಾಲ ವಿತರಿಸುವ ಯೋಜನೆ ಹಮ್ಮಿಕೊಳ್ಳಲಾಗಿದೆ.
  3. ಕೃಷಿ ಪೂರಕವಾದ ನೀರಾವರಿ ಸೌಲಭ್ಯ ಕಲ್ಪಿಸಲು ವಿದ್ಯುತ್ ಮೋಟಾರ ಹಾಗೂ ಪೈಪ ಖರೀದಿಸಲು ಮಾಧ್ಯಮಾವಧಿ ಸಾಲಯೋಜನೆ ಜಾರಿಗೊಳಿಸಿದೆ.
  4. ್ರಾಹಕರಿಗೆ – ಖಖಿಉS, ಓಇಈಖಿ, ಆಃಖಿಐ & ಂಃPS ಸೌಲಭ್ಯಗಳನ್ನು ಕಲ್ಪಿಸಲಾಗಿದೆ.
  5. ಎಲ್ಲ ಶಾಖೆಗಳ ವ್ಯವಹಾರಗಳನ್ನು ಕೋರ ಬ್ಯಾಂಕಿಂಗ್‍ನಲ್ಲಿ ಅಳವಡಿಸಿದ್ದು, ಗ್ರಾಹಕರಿಗೆ ಎಲ್ಲ ಶಾಖೆಗಳಿಂದ ಆನ್ ಲೈನ್ ಮೂಲಕ ದೇಶದ ಯಾವುದೇ ಬ್ಯಾಂಕಿನ ಗ್ರಾಹಕರಿಗೆ ಕ್ಷಣಾರ್ಧದಲ್ಲಿ ಹಣ ಕಳಿಸುವ ಅಥವಾ ನಮ್ಮ ಗ್ರಾಹಕರು ಯಾವದೇ ಬ್ಯಾಂಕಿನಿಂದ ಹಣ ಸ್ವೀಕರಿಸುವ ಸೌಲಭ್ಯವನ್ನು ಕಲ್ಪಿಸಲಾಗಿದೆ.
  6. ್ರಾಹಕರಿಗೆ ಬ್ಯಾಂಕಿಂಗ್ ಹಾಗೂ ಇನ್ನಿತರ ವ್ಯವಹಾರಗಳಿಗೆ ಅವಶ್ಯಕವಿರುವ Pಂಓ ಅಂಖಆ ಗಳನ್ನು ಮಾಡಿಸಿ ಕೊಡುವ ಯೋಜನೆ ಕಲ್ಪಿಸಲಾಗಿದೆ.
  7. ಪ್ರಧಾನ ಕಚೇರಿಯಲ್ಲಿ ಎ.ಟಿ.ಎಂ. ಸೌಲಭ್ಯ ಕಲ್ಪಿಸಲಾಗಿದ್ದು, ಶೀಘ್ರದಲ್ಲಿಯೇ ಎಲ್ಲ ತಾಲೂಕಾ ಸ್ಥಳದಲ್ಲಿ ಎ.ಟಿ.ಎಂ. ಹೊಂದುವ ಕಾರ್ಯಕ್ರಮ ಪ್ರಗತಿಯಲ್ಲಿದೆ.
  8. ನಮ್ಮ ಬ್ಯಾಂಕು 11520 ಏಅಅ ಆಇಃIಖಿ ಅಂಖಆ ಮತ್ತು 335000 ಖUPಂಙ ಏ.ಅ.ಅ. ಅಂಖಆ ಗಳನ್ನು ಗ್ರಾಹಕರಿಗೆ ಪೂರೈಸಿದ್ದು, ಈ ಕಾರ್ಡುಗಳನ್ನು ದೇಶದ ಎಲ್ಲಾ ಬ್ಯಾಂಕುಗಳ ಂಖಿಒ ಗಳಲ್ಲಿ ಉಪಯೋಗಿಸಬಹುದಾಗಿದೆ. ಅದರಂತೆ, ಈ ಕಾರ್ಡುಗಳಿಂದ ಯಾವದೇ ವ್ಯವಹಾರವನ್ನು (PಔS & ಇ.ಅಔಒ) ಮಾಡುವ ಅವಕಾಶ ಕಲ್ಪಿಸಲಾಗಿದೆ.
  9. (ಅ) ಸನ್.2017-18 ನೇ ಸಾಲಿನಲ್ಲಿ ಹಿಂಗಾರು ಹಂಗಾಮಿಗಾಗಿ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿಯಲ್ಲಿ ಅಧಿಸೂಚಿತ ಬೆಳೆಗಳಿಗೆ ಬೆಳೆಸಾಲ ಪಡೆದ ರೈತ ಸಾಲಗಾರರನ್ನು ಅದರಂತೆ, 8512 ಜನ ಸಾಲಗಾರರಲ್ಲದ ರೈತರನ್ನು ಅಳವಡಿಸಿದ್ದು, ಒಟ್ಟು ರೂ: 1 ಕೋಟಿ 43 ಲಕ್ಷ ಪ್ರಿಮೀಯಂ ಹಣವನ್ನು ವಿಮಾ ಕಂಪನಿಗೆ ಸಂದಾಯ ಮಾಡಲಾಗಿದೆ. 2016-17ನೇ ಸಾಲಿನಲ್ಲಿ ಈ ವಿಮಾ ಯೋಜನೆಯಲ್ಲಿ ಅಳವಡಿಸಿದ ಸದಸ್ಯರು ಈಗಾಗಲೇ 61833 ರೈತ ಸದಸ್ಯರಿಗೆ ರೂ:46 ಕೋಟಿ 74 ಲಕ್ಷ ಕ್ಲೇಮ್ ಡಿ.ಪಿ.ಟಿ ಮೂಲಕ ಜಮಾ ಆಗಿದೆ. (ಬ) ಸನ್.2018ನೇ ಮುಂಗಾರು ಹಂಗಾಮಿಗಾಗಿ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬೀಮಾ ಯೋಜನೆಯಡಿಯಲ್ಲಿ ಪ್ರಾ.ಕೃ.ಪ.ಸ.ಸಂಘಗಳ ಮುಖಾಂತರ ಅಧಿಸೂಚಿತ ಬೆಳೆಗಳಿಗೆ ಬೆಳೆ ಸಾಲ ಪಡೆದÀ ರೈತ ಸಾಲಗಾರರನ್ನು ಅದರಂತೆ, ಸಾಲಗಾರರಲ್ಲದ ಒಟ್ಟು 11824 ರೈತ ಸದಸ್ಯರನ್ನು ಸದರಿ ಯೋಜನೆಯಲ್ಲಿ ಅಳವಡಿಸಿದ್ದು, ಒಟ್ಟು ರೂ:1 ಕೋಟಿ 72 ಲಕ್ಷ ಪ್ರಿಮಿಯಂ. ಹಣವನ್ನು ವಿಮಾ ಕಂಪನಿಗೆ ಸಂದಾಯ ಮಾಡಲಾಗಿದೆ.
  10. ಸದರಿ ವರ್ಷದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಮುಖಾಂತರ
    • ಟ್ಯ್ರಾಕ್ಟರ ಖರೀದಿಗಾಗಿ ಮಾಧ್ಯಮಿಕ ಸಾಲವನ್ನು 318 ಜನ ರೈತ ಸದಸ್ಯರಿಗೆ 24 ಕೋಟಿ 78 ಲಕ್ಷ ಸಾಲ ನೀಡಿದೆ.
    • ಪೈಪಲೈನ್ ಸಾಲವನ್ನು 26 ಜನ ರೈತ ಸದಸ್ಯರಿಗೆ ರೂ:1 ಕೋಟಿ 61 ಲಕ್ಷ ಸಾಲ ನೀಡಿದೆ.
    • ಹೈನುಗಾರಿಕೆ ಉದ್ದೇಶಕ್ಕೆ ಸಾಲವನ್ನು 178 ಜನ ರೈತರಿಗೆ ರೂ:73 ಲಕ್ಷ ಸಾಲ ನೀಡಿದೆ.
  11. ಬ್ಯಾಂಕಿನ ಸದಸ್ಯತ್ವ ಹೊಂದಿದ ಪ್ರಾ.ಕೃ.ಪ.ಸ.ಸಂಘಗಳಿಗೆ ಪ್ರತಿ ಸಂಘಕ್ಕೆ ರೂ:1,00,000/- ರÀಂತೆ ಒಟ್ಟು 71 ಪ್ರಾ.ಕೃ.ಪ.ಸ.ಸಂಘಗಳಿಗೆ ಒಟ್ಟು ರೂ:71,00,000/- ಮೂಲಭೂತ ಸೌಕರ್ಯ ಹೊಂದಲು ಬ್ಯಾಂಕಿನಿಂದ ಹಣಕಾಸು ಸೌಲಭ್ಯ ಒದಗಿಸಲಾಗಿದೆ.

ಜಿಲ್ಲೆಯಲ್ಲಿ ಒಟ್ಟು 21299 ಸ್ವಸಹಾಯ ಸಂಘಗಳು ರಚನೆಯಾಗಿದ್ದು, ಈ ಪೈಕಿ ಬ್ಯಾಂಕಿನಲ್ಲಿ 15528 ಹಾಗೂ 5771 ಕೃಷಿ ಪತ್ತಿನ ಸಹಕಾರಿ ಸಂಘಗಳಲ್ಲಿ ಉಳಿತಾಯ ಖಾತೆಗಳನ್ನು ಹೊಂದಿರುತ್ತವೆ. ಇವುಗಳ ಪೈಕಿ ಮೊದಲನೇ ಸಲ ಬ್ಯಾಂಕಿನಿಂದ 9836 ಸ್ವಸಹಾಯ ಗುಂಪುಗಳಿಗೆ ರೂ:71 ಕೋಟಿ 53 ಲಕ್ಷ 35 ಸಾವಿರ ಸಾಲ ಮಂಜೂರಿ ಮಾಡಿ ಬಿಡುಗಡೆ ಮಾಡಲಾಗಿದೆ. ಹಾಗೂ ಪುನರಾವರ್ತಿತವಾಗಿ 6555 ಗುಂಪುಗಳಿಗೆ ರೂ:172 ಕೋಟಿ 57 ಲಕ್ಷ 90 ಸಾವಿರ ಸಾಲ ನೀಡಲಾಗಿದೆ. ಹೀಗೆ ಒಂದು ಸಲ ಹಾಗೂ ಒಂದಕ್ಕಿಂತ ಹೆಚ್ಚು ಸಲ ಒಟ್ಟು 16391 ಸ್ವಸಹಾಯ ಗುಂಪುಗಳಿಗೆ ರೂ:244 ಕೋಟಿ 11 ಲಕ್ಷ ಸಾಲ ನೀಡಲಾಗಿದೆ. ಇದರ ಸಾಲ ವಸೂಲಾತಿ ಪ್ರಮಾಣ 98.84% ರಷ್ಟು ಇರುತ್ತದೆ.

2017-18 ನೇ ಸಾಲಿನಲ್ಲಿ ಯಶಸ್ವಿನಿ ವಿಮಾ ಯೋಜನೆಯಲ್ಲಿ 125942 ರೈತರು ರೂ:8 ಕೋಟಿ 16 ಲಕ್ಷ 84 ಸಾವಿರ ಪ್ರಿಮಿಯಂ. ಹಣ ತುಂಬಿ ಸದಸ್ಯರಾಗಿದ್ದು, ಇದರಲ್ಲಿ 15478 ಜನ ರೈತ ಸದಸ್ಯರು ಹೊರ ರೋಗಿಗಳಾಗಿ 12395 ಜನ ರೈತ ಸದಸ್ಯರು ಉಚಿತ ಶಸ್ತ್ರಚಿಕಿತ್ಸೆ ಪಡೆದುಕೊಂಡಿದ್ದು, ಒಟ್ಟಾರೆ ಇಲ್ಲಿಯವರೆಗೆ 27873 ರೈತ ಸದಸ್ಯರಿಗೆ ರೂ:21 ಕೋಟಿ 65 ಲಕ್ಷ 50 ಸಾವಿರ ಆರ್ಥಿಕ ನೆರವು ಲಭ್ಯವಾಗಿದೆ ಎಂಬ ವಿಷಯವನ್ನು ತಮ್ಮೆಲ್ಲರಿಗೂ ತಿಳಿಸಲು ಸಂತೋಷವೆನಿಸುತ್ತದೆ. ಸದರ ಯೊಜನೆಯನ್ನು ಸರ್ಕಾರ ದಿ.31-05-2018 ರಿಂದ ಸ್ಥಗಿತಗೊಳಿಸಿ ಅದನ್ನು ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆಗೆ ವರ್ಗಾಯಿಸಿದ್ದು ಸದರ ಇಲಾಖೆಯು ಆರೋಗ್ಯ ಕರ್ನಾಟಕ ಯೋಜನೆಯನ್ನು ಜಾರಿಗೆ ತಂದಿದ್ದು, ಈ ಕುರಿತು ಸಭೆ ಜರುಗಿಸಿ ಮುಂದಿನ ಕ್ರಮ ಜರುಗಿಸಲಾಗುವುದು.

ಇದೇ ಜೂನ್ ಅಂತ್ಯಕ್ಕೆ ಕಿಸಾನ ಕ್ರೆಡಿಟ್ ಕಾರ್ಡ ಯೋಜನೆಯಲ್ಲಿ 344235 ಸಾಲಗಾರ ಸದಸ್ಯರಿದ್ದು, ಇದರ ಪೈಕಿ 237652 ಜನ ಸದಸ್ಯರನ್ನು ಅಪಘಾತ ವಿಮಾ ಯೋಜನೆಯಲ್ಲಿ ಅಳವಡಿಸಲಾಗಿದೆ. ಬಾಕಿ ಉಳಿದ 106583 ಸಾಲಗಾರ ಸದಸ್ಯರು ಕಿಸಾನ ಕ್ರೆಡಿಟ್ ಕಾರ್ಡ ಪಡೆದುಕೊಂಡು ಅಪಘಾತ ವಿಮಾ ಯೋಜನೆಯ ಸೌಲಭ್ಯ ಸದುಪಯೋಗಪಡಿಸಿಕೊಳ್ಳಲು ವಿನಂತಿಸಲಾಗಿದೆ. ಸ್ಟಾರ್ ಹೆಲ್ಥ ಆ್ಯಂಡ್ ಅಲಾಯಿಡ್ ಇನ್ಸುರನ್ಸ ಕಂಪನಿ ಬೆಳಗಾವಿ ಇವರಿಗೆ ರೂ:25 ಲಕ್ಷ 40 ಸಾವಿರ ಪ್ರಿಮಿಯಂ ಹಣ ಪಾವತಿಸಲಾಗಿದ್ದು, ಈ ಯೋಜನೆಯಿಂದ ಜಿಲ್ಲೆಯಲ್ಲಿಯ ಸಾಲಗಾರ ರೈತ ಸದಸ್ಯರಿಗೆ ರೂ:30,00,000/- ವಿಮಾ ಪರಿಹಾರದ ಆರ್ಥಿಕ ಸಹಾಯ ದೊರೆತಿರುತ್ತದೆ.

ನಮ್ಮ ಬ್ಯಾಂಕಿನಲ್ಲಿ ಪ್ರಧಾನ ಮಂತ್ರಿ ಜೀವನಜ್ಯೋತಿ ವಿಮಾ ಯೋಜನೆಯಡಿ 2403 ಉಳಿತಾಯ ಖಾತೆದಾರರಿಂದ ವಿಮಾ ಕಂತು ರೂ.330/- ರಂತೆ ಪಡೆದುಕೊಂಡು ರೂ:7 ಲಕ್ಷ 93 ಸಾವಿರ ವಿಮೆ ಪಾವತಿಸಿದ್ದು, ಇದರ ಪೈಕಿ 13 ಜನ ಮೈತ ಖಾತೆದಾರರ ವಾರಸುದಾರರಿಗೆ ತಲಾ ರೂ:2 ಲಕ್ಷದಂತೆÉ ಒಟ್ಟು ರೂ:26 ಲಕ್ಷ ಕ್ಲೇಮ ಸೌಲಭ್ಯ ದೊರೆತಿದೆ. ಅದರಂತೆ, ಪ್ರಧಾನ ಮಂತ್ರಿ ಸುರಕ್ಷಾ ಬೀಮಾ ಯೋಜನೆಯಡಿಯಲ್ಲಿ ಒಟ್ಟು 7025 ಉಳಿತಾಯ ಖಾತೆದಾರರಿಂದ ವಿಮಾ ಕಂತು ರೂ.12 ರಂತೆ ಪಡೆದುಕೊಂಡು ರೂ:84 ಸಾವಿರ ವಿಮೆ ಪಾವತಿಸಲಾಗಿದೆ. 3 ಜನ ಮೈತ ಸದಸ್ಯರಿಗೆ ರೂ:6,00,000/- ವಿಮೆ ಒದಗಿಸಲಾಗಿದೆ.

~: ಬ್ಯಾಂಕು ಗ್ರಾಹಕರಿಗೆ ಒದಗಿಸುತ್ತಿರುವ ಸಾಲ ಸೌಲಭ್ಯಗಳು :~

  1. ಬ್ಯಾಂಕಿನ ಗ್ರಾಹಕರಿಗೆ ನಿವೇಶನ ಖರೀದಿಸಲು / ಮನೆ ಕಟ್ಟಲು / ಮನೆ ಖರೀದಿಸಲು /ವ್ಯಾಪಾರ ಮಳಿಗೆ ಖರೀದಿಸಲು/ ಫ್ಲ್ಯಾಟ ಖರೀದಿಸಲು / ಗೃಹ ಅಡಮಾನ ಸಾಲ ನೀಡಲಾಗುತ್ತಿದೆ.
  2. ಸರಕಾರಿ, ಅರೇಸರ್ಕಾರಿ ನೌಕರರಿಗೆ ವೇತನ ಆಧಾರಿತ ಸಾಲ.
  3. ಬ್ಯಾಂಕಿನ ಎಲ್ಲ ಗ್ರಾಹಕರಿಗೆ ದ್ವಿ.ಚಕ್ರವಾಹನ ಹಾಗೂ ಸ್ವಂತ ಉಪಯೋಗಕ್ಕಾಗಿ ಕಾರು (ನಾಲ್ಕು ಚಕ್ರ ವಾಹನ) ಖರೀದಿಸಲು ಸಾಲಗಳÀನ್ನು ನೀಡಲಾಗುತ್ತ್ತಿದೆ.
  4. ಬಂಗಾರದ ಆಭರಣಗಳ ಅಡವಿನ ಸಾಲ ಕೊಡಮಾಡುತ್ತಿದ್ದು, ಅದರ ಮಿತಿ ವೈಯಕ್ತಿಕವಾಗಿ ರೂ:5.00 ಲಕ್ಷದವರೆಗೆ ಇರುತ್ತದೆ.
  5. ಹೊಟೇಲ್ ಉದ್ಯಮದಾರರಿಗೆ, ಬೃಹತ್ ಪ್ರಮಾಣದ ಕೈಗಾರಿಕೆ ನಿರ್ಮಾಣಕ್ಕಾಗಿ ಹಾಗೂ ವಾಣಿಜ್ಯ ವ್ಯಾಪಾರಸ್ಥರಿಗೆ ಸಾಲ ಸೌಲಭ್ಯವನ್ನು ಒದಗಿಸಲಾಗುತ್ತಿದೆ.
  6. ಬ್ಯಾಂಕು ಜಿಲ್ಲೆಯ ಬಡ ಪ್ರತಿಭಾನ್ವಿತ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕಾಗಿ ಸಾಲ (ಅಇಖಿ ರ್ಯಾಕಿಂಗ್ ಆಧರಿಸಿ) ನೀಡಲಾಗುತ್ತಿದೆ.

ಬ್ಯಾಂಕು ಈಗಿದ್ದ ಪ್ರಧಾನ ಕಚೇರಿ ಹಾಗೂ ಮುಖ್ಯ ಶಾಖೆಯನ್ನು ನೆಲಸಮಗೊಳಿಸಿದ್ದು, ಸದರಿ ಸ್ಥಳದಲ್ಲಿ ಭವ್ಯ ಹಾಗೂ ಸುಸಜ್ಜಿತವಾದ ಶತಮಾನೋತ್ಸವದ ಕಟ್ಟಡವನ್ನು ನಿರ್ಮಿಸುವ ಕೆಲಸವು ಪ್ರಗತಿಯಲ್ಲಿ ಇರುತ್ತದೆ. ಬ್ಯಾಂಕಿನ 20 ಶಾಖೆಗಳಿಗಾಗಿ ಸ್ವಂತ ಕಟ್ಟಡಗಳನ್ನು ಹೊಂದಲಾಗಿದೆ. ಅವುಗಳಲ್ಲಿ (1) ಕಾಗವಾಡ ಹಾಗೂ (2) ಕಬ್ಬೂರ ಶಾಖೆಗಳು ನೂತನ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿರುತ್ತವೆ. (1) ಚಿಕ್ಕೋಡಿ ಹಾಗೂ (2) ಮುನವಳ್ಳಿ ಶಾಖಾ ಆಫೀಸುಗಳಿಗಾಗಿ ನಿರ್ಮಿಸಿದ ಕಟ್ಟಡದಲ್ಲಿ ಶಾಖೆಯನ್ನು ಪ್ರಾರಂಭಿಸುವ ಕ್ರಮ ಇಡಲಾಗಿದೆ. ಇದು ಅಲ್ಲದೆ, ಐಗಳಿ ಶಾಖೆಯ ಸಲುವಾಗಿ ಕೂಡಾ ಶಾಖೆಗೆ ಅವಶ್ಯಕವಿರುವ ಕೆಲವೊಂದು ಮಾರ್ಪಾಡುಗಳನ್ನು ಮಾಡಿ ಶಾಖಾ ಆಫೀಸನ್ನು ಸಧ್ಯದಲ್ಲಿಯೇ ಸ್ಥಳಾಂತರಿಸಲಾಗುವುದು. ಕಿತ್ತೂರ ಶಾಖೆಗಾಗಿ ನಿವೇಶನವನ್ನು ಖರೀದಿಸಲಾಗಿದೆ.

ಬ್ಯಾಂಕಿನ ಸಮಸ್ತ ಅಭ್ಯುದಯದ ಶ್ರೇಯಸ್ಸಿಗೆ ಸಹಕರಿಸಿದ ಘನತೆವೆತ್ತ ಕೇಂದ್ರ ಹಾಗೂ ಕರ್ನಾಟಕ ರಾಜ್ಯ ಸರ್ಕಾರಕ್ಕೂ, ಯಾವತ್ತೂ ಸಚಿವರುಗಳಿಗೂ, ಶಾಸಕರಿಗೂ ಹಾಗೂ ಸಂಸದರಿಗೂ ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕಿನ ಆಡಳಿತ ಮಂಡಳ ಸದಸ್ಯರಿಗೂ, ಅಧಿಕಾರ ವರ್ಗದವರಿಗೂ, ನಬಾರ್ಡ ಸಂಸ್ಥೆಯ ಅಧಿಕಾರಿಗಳಿಗೂ, ಸಹಕಾರಿ ಲೆಕ್ಕ ಪರಿಶೋಧನಾ ಜಂಟಿ ನಿರ್ದೇಶಕರಿಗೂ ಹಾಗೂ ಉಪ ನಿರ್ದೇಶಕರಿಗೂ, ಸರ್ಕಾರದ ಸಹಕಾರಿ ಇಲಾಖೆ ಅಧಿಕಾರಿಗಳಿಗೆ, ಕೃಷಿ ಮತ್ತು ತೋಟಗಾರಿಕೆ ಉಪ ನಿರ್ದೇಶಕರಿಗೆ, ಬ್ಯಾಂಕಿನ ಶಾಸನಬದ್ಧ ಲೆಕ್ಕ ಪರಿಶೋಧನೆ ಮಾಡಿದ / ಬ್ಯಾಂಕಿನ ಆದಾಯಕರದ ಪಾವತಿಗೆ ಬಗ್ಗೆ ಸಲಹೆ ಸೂಚನೆ ನೀಡಿದ ಚಾರ್ಟರ್ಡ ಅಕೌಂಟಂಟರುಗಳಿಗೂ ಕೃತಜ್ಞತೆ ಸಲ್ಲಿಸುತ್ತೇನೆ. ರೈತ ಬಾಂಧವರಿಗೆ ಠೇವುದಾರರಿಗೆ, ಗ್ರಾಹಕರಿಗೆ, ಸದಸ್ಯರಿಗೆ, ಹಿತಚಿಂತಕರಿಗೆ, ಹಿರಿಯ ಸಹಕಾರಿ ಧುರೀಣರಿಗೆ ಹಾಗೂ ಎಲ್ಲ ಸಹಕಾರಿ ಬಂಧು ಭಗಿನಿಯವರಿಗೆ ಹಾಗೂ ಬ್ಯಾಂಕಿನ ಎಲ್ಲ ಸಿಬ್ಬಂದಿ ವರ್ಗದವರಿಗೂ ನನ್ನ ಅನಂತ ಧನ್ಯವಾದಗಳನ್ನು ಅರ್ಪಿಸುತ್ತೇನೆ.

 


Get In Touch

Near Central Bus Stand,
Old P B Road,
Belagavi, Karnataka 590016

0831-2466896

©2021. All Rights Reserved.     Website updated: 27-10-2021

     Privacy Policy